ದೇವರಸ
	ಸು.1650. ಜೈನಕವಿ. ಗುರುದತ್ತ ಚರಿತ್ರೆ ಎಂಬುದು ಈತನ ಕೃತಿ. ಇದು ಸಾಂಗತ್ಯ ರೂಪದಲ್ಲಿದ್ದು ಸುಮಾರು 813 ಪದ್ಯಗಳನ್ನು ಒಳಗೊಂಡಿದೆ. ಗುರುದತ್ತನ ಕಥೆಯನ್ನು ವೀರಜನರ ಶ್ರೀಸಮವಸರಣದಲ್ಲಿ ಮಾರಮಥನ ಗೌತಮರು ಶ್ರೇಣಿಕ ಮಹಾರಾಜನಿಗೆ ಹೇಳಿದಂತೆಯೂ ಅದನ್ನು ತಾನು ಆಚಾರ್ಯ ಗುರು ಸಂತಾನದಿಂದ ಅರಿತು ಬರೆದಂತೆಯೂ ಹೇಳಿಕೊಂಡಿದ್ದಾನೆ.  ಕೃತಿಯಲ್ಲಿ ಪೂರ್ವಕವಿಗಳಾದ ಪೂಜ್ಯಪಾದ, ಗುಣಭದ್ರ, ವಿಜಯ, ಅಕಳಂಕ, ನಾಗಚಂದ್ರ. ಕಾಮ, ಅಗ್ಗಳ, ಶಾಂತಿವರ್ಮ, ಭಟ್ಟಾಕಳಂಕ, ಪಂಪ ಮುಂತಾದವರುಗಳನ್ನು ಸ್ಮರಿಸಿದ್ದಾನೆ. ಕೃತಿಯ ಆರಂಭದಲ್ಲಿ ಚತುರ್ವಿಂಶತಿ ಜಿನರನ್ನೂ ಅನಂತರ ಸಿದ್ಧಾದಿಗಳು, ಸರಸ್ವತಿ, ಸರ್ವಾಹ್ಣಯಕ್ಷ, ಕೂಷ್ಮಾಂಡಿನಿ- ಇವರನ್ನೂ ಭಕ್ತಿಯಿಂದ ಸ್ತುತಿಸಿದ್ದಾನೆ. 
(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ